Public News 18
Breaking News India Latest Updates Live News News Public Issues

ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?

ಬದರಿನಾಥ ಧಾಮದಿಂದ ಡೆಹ್ರಾಡೂನ್‌ನ ಸಹಸ್ರಧಾರಾಗೆ ಪೈಲಟ್ ಸೇರಿದಂತೆ ಐವರು ಕನ್ನಡಿಗರು ಸೇರಿದಂತೆ 6 ಜನರನ್ನು ಹೊತ್ತೊಯ್ಯುತ್ತಿದ್ದ ‘ಟ್ರಾನ್ಸ್ ಭಾರತ್’ ಸಂಸ್ಥೆಯ ಹೆಲಿಕಾಪ್ಟರ್, ಜೋಶಿಮಠ ಪ್ರದೇಶದ ಚಾಯೀ ಮತ್ತು ಥೈಂಗ್ ಗ್ರಾಮಗಳ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿದಂತೆ ಆರೂ ಜನರು ಮೃತಪಟ್ಟಿದ್ದಾರೆ. ಇಂದು ಸಂಜೆ ಅವರೆಲ್ಲರ ಸುಟ್ಟು ಕರಕಲಾದ ಶವಗಳನ್ನು ಪತ್ತೆಹಚ್ಚಲಾಗಿದೆ. ಭಾರತೀಯ ಸೇನೆಯು ಈ ದುರಂತದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಸ್ಥಳವನ್ನು ಪತ್ತೆಹಚ್ಚಿ ಪರಿಶೀಲಿಸಿದಾಗ ಹೆಲಿಕಾಪ್ಟರ್‌ನಲ್ಲಿದ್ದ ಯಾರೊಬ್ಬರೂ ಬದುಕಿ ಉಳಿದಿಲ್ಲ ಎಂಬುದು ದೃಢಪಟ್ಟಿದೆ. ಹಾಗಾದರೆ, ಈ ಹೆಲಿಕಾಪ್ಟರ್​ ಅಪಘಾತಕ್ಕೆ ಕಾರಣವೇನು? ಈ ಘಟನೆಗೂ ಮುನ್ನ ಏನೇನಾಯ್ತು? ಎಂಬ ವಿವರ ಇಲ್ಲಿದೆ.

ಡೆಹ್ರಾಡೂನ್, ಅಕ್ಟೋಬರ್ 30: ಬೆಂಗಳೂರಿನಿಂದ ಕೇದಾರನಾಥ ಮತ್ತು ಬದರಿನಾಥಕ್ಕೆ ಹೋಗಿದ್ದ ಐವರು ಗೆಳೆಯರು ದಾರುಣ ಅಂತ್ಯ ಕಂಡಿದ್ದಾರೆ. ಈ ಐವರಲ್ಲಿ ಸಿಸಿಬಿ ಇನ್​ಸ್ಪೆಕ್ಟರ್ ಕೂಡ ಸೇರಿದ್ದಾರೆ. ಉಳಿದ ನಾಲ್ವರು ವಕೀಲರು. ಇಂದು ಮಧ್ಯಾಹ್ನ ಬದರಿನಾಥದಲ್ಲಿ ದರ್ಶನ ಮುಗಿಸಿ ಟ್ರಾನ್ಸ್ ಭಾರತ್ ಏವಿಯೇಷನ್ ​​ಹೆಲಿಕಾಪ್ಟರ್​ನಲ್ಲಿ ಹಿಂತಿರುಗುತ್ತಿದ್ದ ವೇಳೆ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಇಂದು ಸಂಜೆಯ ವೇಳೆ ಪೈಲಟ್ ಹಾಗೂ ಈ ಐವರ ಸುಟ್ಟು ಕರಕಲಾದ ಶವಗಳನ್ನು ಪತ್ತೆಹಚ್ಚಲಾಗಿದೆ. ಹಾಗಾದರೆ, ಇಂದು ಹೆಲಿಕಾಪ್ಟರ್ ಪತನವಾಗಿದ್ದು ಹೇಗೆ? ಅದಕ್ಕೂ ಮೊದಲು ಏನೇನಾಯ್ತು? ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಗೆಳೆಯರಾದ ಅರುಣ್ ಸಾಲುಂಕೆ, ಎಚ್.ಎಸ್. ನಾಗರಾಜ್, ಪ್ರತಾಪ್ ಬಚಿಹಳ್ಳಿ ನಿಂಗರಾಜನ್, ಸುಧೀರ್ ಕೆ. ಮತ್ತು ಶಂಕರಗೌಡ ವಿ.ಬಿ. ಎಂಬುವವರು ಉತ್ತರಾಖಂಡದ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಇಂದು ಬದರಿನಾಥ ದೇವಸ್ಥಾನದಲ್ಲಿ ದರ್ಶನ ಮುಗಿಸಿದ ಅವರು ಟ್ರಾನ್ಸ್ ಭಾರತ್ ಏವಿಯೇಷನ್ ​​ಹೆಲಿಕಾಪ್ಟರ್​ನಲ್ಲಿ ವಾಪಾಸ್ ಬರುತ್ತಿದ್ದರು. ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಸಭರ್ವಾಲ್ ಸೇರಿದಂತೆ 6 ಜನರು ಅದರಲ್ಲಿದ್ದರು. ದೇವರ ದರ್ಶನ ಮುಗಿಸಿ ವಾಪಾಸ್ ಬರುತ್ತಿದ್ದ ಅವರಿಗೆ ಇದೇ ತಮ್ಮ ಕೊನೆಯ ದಿನವಾಗಲಿದೆ ಎಂಬ ಸುಳಿವೂ ಇರಲಿಲ್ಲ. ಇಂದು ಮಧ್ಯಾಹ್ನ 1.14ಕ್ಕೆ ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಾಗೆ ಹೆಲಿಕಾಪ್ಟರ್ ಹೊರಟಿತ್ತು.

Share

Related posts

Leave a Comment