Public News 18
Breaking News Business Economy Finance Health News India Markets Top Stories

Gold Rates 01 November: ಹತ್ತು ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 4,650 ರೂ ಕುಸಿತ

Gold Price 01 November 2026: ಚಿನ್ನ, ಬೆಳ್ಳಿ ಬೆಲೆಗಳೂ ವಾರಾಂತ್ಯದಲ್ಲಿ ಭಾರೀ ಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 310 ರೂ, ಬೆಳ್ಳಿ ಬೆಲೆ 10 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 13,040 ರೂನಿಂದ 12,730 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,888 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 200 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 205 ರೂ ಇದೆ.

ನವದೆಹಲಿ, ನವೆಂಬರ್ 1: ಚಿನ್ನದ ಬೆಲೆ ಮತ್ತೆ ಭರ್ಜರಿಯಾಗಿ ಕುಸಿದಿದೆ. ಶುಕ್ರವಾರ ಒಂದು ಗ್ರಾಮ್​ಗೆ 155 ರೂ ಕಡಿಮೆಗೊಂಡಿದ್ದ ಬಂಗಾರದ ದರ ಈ ವಾರಾಂತ್ಯದಲ್ಲಿ 310 ರೂ ಇಳಿದಿದೆ. ಎರಡು ದಿನದಲ್ಲಿ ಇದರ ಬೆಲೆಯಲ್ಲಿ 465 ರೂ ಇಳಿದಂತಾಗಿದೆ. ಆಭರಣ ಚಿನ್ನದ ಬೆಲೆ 13,000 ರೂ ಒಳಗೆ ಬಂದಿದೆ. ಅಪರಂಜಿ ಚಿನ್ನದ ಬೆಲೆ 14,000 ರೂ ಒಳಗೆ ಕುಸಿದಿದೆ. ಬೆಳ್ಳಿ ಬೆಲೆಯೂ 10 ರೂ ಕುಸಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನ, ಬೆಳ್ಳಿ ಬೆಲೆಗಳು ಗಣನೀಯವಾಗಿ ತಗ್ಗಿವೆ. ಸ್ಪಾಟ್ ಚಿನ್ನ, ಬೆಳ್ಳಿ ಬೆಲೆಗಳೂ ಇಳಿದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 20,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,888
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,730
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,416
  • ಬೆಳ್ಳಿ ಬೆಲೆ 1 ಗ್ರಾಂಗೆ: 200 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,730 ರೂ
  • ಚೆನ್ನೈ: 12,730 ರೂ
  • ಮುಂಬೈ: 12,730 ರೂ
  • ದೆಹಲಿ: 12,745
  • ಕೋಲ್ಕತಾ: 12,730 ರೂ
  • ಕೇರಳ: 12,730 ರೂ
  • ಅಹ್ಮದಾಬಾದ್: 12,735 ರೂ
  • ಜೈಪುರ್: 12,745
  • ಲಕ್ನೋ: 12,745
  • ಭುವನೇಶ್ವರ್: 12,730 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 124.60 ಡಾಲರ್ (11,826 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.579 ಡಾಲರ್ (150 ರುಪಾಯಿ)

ಇದನ್ನೂ ಓದಿ: ಕೇಂದ್ರದಿಂದ ಕನ್ನಡ ರಾಜ್ಯೋತ್ಸವ ಬಂಪರ್‌ ಕೊಡುಗೆ: ಕರ್ನಾಟಕಕ್ಕೆ 4,504 ಕೋಟಿ ತೆರಿಗೆ ಪಾಲು

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 13,888 ರುಪಾಯಿ
  • ಮಲೇಷ್ಯಾ: 520 ರಿಂಗಿಟ್ (12,167 ರುಪಾಯಿ)
  • ದುಬೈ: 468.75 ಡಿರಾಮ್ (12,129 ರುಪಾಯಿ)
  • ಅಮೆರಿಕ: 129 ಡಾಲರ್ (12,247 ರುಪಾಯಿ)
  • ಸಿಂಗಾಪುರ: 174.80 ಸಿಂಗಾಪುರ್ ಡಾಲರ್ (12,985 ರುಪಾಯಿ)
  • ಕತಾರ್: 472.50 ಕತಾರಿ ರಿಯಾಲ್ (12,306 ರೂ)
  • ಸೌದಿ ಅರೇಬಿಯಾ: 486 ಸೌದಿ ರಿಯಾಲ್ (12,294 ರುಪಾಯಿ)
  • ಓಮನ್: 50.10 ಒಮಾನಿ ರಿಯಾಲ್ (12,355 ರುಪಾಯಿ)
  • ಕುವೇತ್: 39.47 ಕುವೇತಿ ದಿನಾರ್ (12,157 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 200 ರೂ
  • ಚೆನ್ನೈ: 205 ರೂ
  • ಮುಂಬೈ: 200 ರೂ
  • ದೆಹಲಿ: 200 ರೂ
  • ಕೋಲ್ಕತಾ: 200 ರೂ
  • ಕೇರಳ: 205 ರೂ
  • ಅಹ್ಮದಾಬಾದ್: 200 ರೂ
  • ಜೈಪುರ್: 200 ರೂ
  • ಲಕ್ನೋ: 200 ರೂ
  • ಭುವನೇಶ್ವರ್: 205 ರೂ
  • ಪುಣೆ:

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

Share

Related posts

Leave a Comment