Public News 18
Breaking News Business Headlines India News Top Stories Trending

PM Kisan scheme: ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ; ಅರ್ಹ ರೈತರಿಗೆ 18,000 ರೂ ವಿತರಣೆ

ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿ ಕೇಂದ್ರ ಸರ್ಕಾರ 24ನೇ ಕಂತಿನ ಹಣವನ್ನು ಇಂದು ಅಕ್ಟೋಬರ್ 30ರಂದು ಬಿಡುಗಡೆ ಮಾಡಿದೆ. ಗುಜರಾತ್​ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಹಣ ಬಿಡಗಡೆ ವಿಚಾರವನ್ನು ಘೋಷಿಸಿದರು. 9.34 ಕೋಟಿಗೂ ಅಧಿಕ ರೈತರಿಗೆ ತಲಾ 2,000 ರೂನಂತೆ ಒಟ್ಟು 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬನಸ್​ಕಾಂತ, ಗುಜರಾತ್, ಅಕ್ಟೋಬರ್ 30: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು 10 ಕೋಟಿ ಸಮೀಪದಷ್ಟು ರೈತರಿಗೆ 18,000 ಕೋಟಿ ರೂಗೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್​ಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗುಜರಾತ್ ರಾಜ್ಯವೊಂದರಲ್ಲೇ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 1,000 ಕೋಟಿ ರೂಗೂ ಹೆಚ್ಚು ಹಣ ನೀಡಲಾಗಿದೆ. ಬನಸ್ಕಾಂತದಲ್ಲೇ 50 ಕೋಟಿ ರೂಗೂ ಹೆಚ್ಚು ಮೊತ್ತ ವಿತರಣೆ ಆಗಿದೆ ಎಂದು ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಎಂದ ಮೋದಿ: ಗುಜರಾತ್‌ಗೆ 14 ಸಾವಿರ ಕೋಟಿ ರೂ. ಯೋಜನೆಗಳ ಕೊಡುಗೆ

ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ 24ನೇ ಕಂತಿನ ಹಣವನ್ನು 9.34 ಕೋಟಿಗೂ ಅಧಿಕ ರೈತರಿಗೆ ನೀಡಲಾಗಿದೆ. ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಅಕೌಂಟ್​ಗೆ 2,000 ರೂ ಹಣ ನೇರವಾಗಿ ಜಮೆ ಆಗಲಿದೆ. ಸರ್ಕಾರ ಈ 24ನೇ ಕಂತಿನ ಹಣ ವಿತರಣೆಗೆ 18,000 ಕೋಟಿ ರೂ ವೆಚ್ಚ ಮಾಡಿದೆ.

2018-19ರಲ್ಲಿ ಜಾರಿಗೆ ಬಂದ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಹಾಕಿರುವ ಒಟ್ಟು ಹಣವು 4.5 ಲಕ್ಷ ಕೋಟಿ ರೂಗೂ ಅಧಿಕ. ಬನಸ್ಕಾಂತ ಸಮಾವೇಶದಲ್ಲಿ ಮೋದಿ ಈ ಮಾಹಿತಿ ನೀಡಿದರು. ಹಾಗೆಯೇ, ರೈತರಿಗೆ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲು ಸರ್ಕಾರ 16 ಲಕ್ಷ ಕೋಟಿ ರೂ ವ್ಯಯಿಸಿದೆ ಎಂದೂ ಮೋದಿ ತಿಳಿಸಿದರು.

ಪಿಎಂ ಕಿಸಾನ್ ಹಣ ಬಂದಿದೆಯಾ ಪರಿಶೀಲಿಸಿ…

  • ಪಿಎಂ ಕಿಸಾನ್ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in
  • ಇಲ್ಲಿ ಫಾರ್ಮರ್ಸ್ ಕಾರ್ನರ್​ನಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ.
  • ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ದುಕೊಳ್ಳಿ.
  • ಆ ಗ್ರಾಮದಲ್ಲಿ ಎಲ್ಲಾ ಫಲಾನುಭವಿಗಳ ಪಟ್ಟಿ ಇರುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಇದನ್ನೂ ಓದಿ: ಗುಜರಾತ್‌: 14 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಇದೇ ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಹೊಸದಾಗಿ ಯೋಜನೆಗೆ ನೊಂದಾಯಿಸುವ ಅವಕಾಶ ಇರುತ್ತದೆ. ಇಕೆವೈಸಿ ಅಪ್ಡೇಟ್ ಮಾಡಬಹುದು. ಈಗಾಗಲೇ ಪಿಎಂ ಕಿಸಾನ್ ಹಣ ಬರುತ್ತಿದ್ದು, ತಮಗೆ ಈ ಧನಸಹಾಯ ಬೇಡವೆನಿಸಿದರೆ ಅದನ್ನು ರದ್ದುಗೊಳಿಸುವ ಅವಕಾಶವೂ ಇರುತ್ತದೆ.

Share

Related posts

Leave a Comment