Public News 18
Breaking News Breaking-News Live News Top Stories

ಅಯ್ಯೋ..ಪ್ರಧಾನಿಗೆ ಅವಾಚ್ಯ ಶಬ್ದ ಬಳಸಿದ ಅಮೆರಿಕ ಅಧ್ಯಕ್ಷ Donald Trump; ಸುಮ್ನೆ ಇರಲ್ಲ ಎಂದ ಇಸ್ರೇಲ್

Iran Israel War: ಅಮೆರಿಕ ಹಾಗೂ ಇರಾನ್‌ ನಡುವಿನ ಈಗಿನ ಸಂಬಂಧ, ಯುದ್ಧದ ಬಗ್ಗೆ ಹೊಸತಾಗಿ ಹೇಳುವಂಥದ್ದು ಏನೂ ಇಲ್ಲ. ಈಗ ಅಮೆರಿಕ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಬೇಕಾದರೆ ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಲೇಬೇಕು ಎಂದು ಇರಾನ್‌ ಹೇಳಿದೆ. ಈಗ ಟ್ರಂಪ್‌ ಅವರು ಬೈದಿದ್ದಾರೆ. 

ದೇಶಗಳ ಮಧ್ಯೆ ಯುದ್ಧ ಯಾಕೆ?

ಇರಾನ್‌ ಹಾಗೂ ಇಸ್ರೇಲ್‌ಗೆ ಆಗಿ ಬರೋದಿಲ್ಲ. ಇಸ್ಲಾಂಮಿಕ್‌ ಕ್ರಾಂತಿ ಆದ ಬಳಿಕ ಕೂಡ ಇಸ್ರೇಲ್‌ಗೆ ಕಾನೂನುಬದ್ಧ ದೇಶ ಎಂಬ ಪಟ್ಟ ಕೂಡ ಸಿಕ್ಕಿಲ್ಲ. ಇಸ್ರೇಲ್‌ನ್ನು ನಿರ್ನಾಮ ಮಾಡೋದು ಇರಾನ್‌ ಗುರಿ. ಇಸ್ರೇಲ್‌ ಹಾಗೂ ಅಮೆರಿಕ ಒಳ್ಳೆಯ ಸ್ನೇಹ ಸಂಬಂಧ ದೇಶಗಳು. ಇಸ್ರೇಲ್‌ಗೆ ಏನೇ ಆದರೂ ಅಮೆರಿಕ ಅದರ ಪರ ಇರುತ್ತದೆ. ಹೀಗಾಗಿ ಇರಾನ್‌ ಗಾಜಾದ ಹಮಾಸ್ (Hamas), ಲೆಬನಾನ್‌ನ ಹೆಜ್ಬುಲ್ಲಾ (Hezbollah), ಯೆಮನ್‌ನ ಹೌತಿ (Houthis) ಬಂಡುಕೋರರರಿಗೆ ಹಣ ಕೊಟ್ಟು ಇಟ್ಟುಕೊಂಡಿದೆ.

ಇಸ್ರೇಲ್‌ ಪ್ರಧಾನಿಗೆ ಬೈದ್ರು!

ಫೋನ್‌ನಲ್ಲಿ‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು “ಹುಚ್ಚ”, ಕೃತಘ್ನ ಎಂದು ಹೇಳಿದ್ದಾರೆ. “ನಿನಗೇನಾದರೂ ಹುಚ್ಚು ಹಿಡಿದಿದ್ಯಾ? ನಾನಿಲ್ಲ ಅಂದ್ರೆ ನೀನು ಈಗ ಜೈಲಿನಲ್ಲಿ ಇರಬೇಕಾಗಿತ್ತು. ನಾನು ನಿನ್ನನ್ನು ಸೇಫ್‌ ಮಾಡಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಹೀಗಾಗಿ ಇಡೀ ಜಗತ್ತೇ ಇಸ್ರೇಲ್ ಅನ್ನು ದ್ವೇಷ ಮಾಡುವಂತಾಗಿದೆ” ಎಂದು ಹೇಳಿದ್ದಾರಂತೆ.

Share

Related posts

Leave a Comment