Public News 18
Breaking News Headlines India Latest Updates Live News Trending

ದರ್ಶನ್ ಮನೆ ಮುಂದೆ ಆಟೋಗಳ ಸಾಲು, ಅನಾಮಿಕನಿಂದ ಕೊಲೆ ಬೆದರಿಕೆ

ನಟ ದರ್ಶನ್ ಸಹ ಧನ್ವೀರ್ ವಿರುದ್ಧ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರು ಬಳಸದಂತೆ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಧನ್ವೀರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ನವೆಂಬರ್ 1 ರಂದು ನಟ ದರ್ಶನ್ ಮನೆ ಮುಂದೆ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ.

ವಿಜಯಲಕ್ಷ್ಮಿ ದರ್ಶನ್ ಮತ್ತು ಧನ್ವೀರ್ ನಡುವಿನ ಮುನಿಸು ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹಲವು ಎಫ್​​ಐಆರ್​​ಗಳು ಧನ್ವೀರ್ ವಿರುದ್ಧ ದಾಖಲಾಗಿವೆ. ನಟ ದರ್ಶನ್ ಸಹ ಧನ್ವೀರ್ ವಿರುದ್ಧ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರು ಬಳಸದಂತೆ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಧನ್ವೀರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ನವೆಂಬರ್ 1 ರಂದು ನಟ ದರ್ಶನ್ ಮನೆ ಮುಂದೆ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ.

ತಡವಾಗಿ ಬೆಳಕಿಗೆ ಬಂದಿರುವ ವಿಚಾರವೆಂದರೆ ನವೆಂಬರ್​​ 1 ರಂದು ದರ್ಶನ್​​ ಅವರ ರಾಜರಾಜೇಶ್ವರಿ ನಗರದ ಮನೆಯ ಮುಂದೆ ಒಂದರ ಹಿಂದೊಂದು ಹಲವು ಆಟೋಗಳು ಬಂದಿವೆ. ಯಾರೋ ಕಾರ್ತಿಕ್ ಹೆಸರಿನಲ್ಲಿ ಈ ಆಟೋಗಳನ್ನು ಬುಕ್ ಮಾಡಲಾಗಿದೆ. ಆಟೋ ಡ್ರೈವರ್​​ಗೆ ಬುಕ್ ಮಾಡಿದ ವ್ಯಕ್ತಿ ಕರೆ ಮಾಡಿ, ‘ನಾನು ಧನ್ವೀರ್ ಮ್ಯಾನೇಜರ್ ಮಾತನಾಡುತ್ತಿದ್ದೀನಿ, ಆಟೋಗಳನ್ನು ಒಳಗೆ ಬಿಡು’ ಎಂದು ದರ್ಶನ್ ಅವರ ಭದ್ರತೆಯವರ ಬಳಿ ಹೇಳಿದ್ದಾರೆ. ದರ್ಶನ್ ಅವರ ಭದ್ರತೆಯವರು ಹೆಚ್ಚಿನ ವಿಚಾರಣೆ ಮಾಡಿದಾಗ, ಧನ್ವೀರ್ ಮ್ಯಾನೇಜರ್ ತಾನು ಎಂದು ಪರಿಚಯ ಮಾಡಿಕೊಂಡಿರುವ ಆ ಅನಾಮಿಕ, ಧನ್ವೀರ್ ವಿರುದ್ಧ ಕೇಸು ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

Share

Related posts

Leave a Comment