Public News 18
Breaking News Headlines Hubli-Dharwad India Karnataka Latest Updates Live News Top Stories Trending

ಹುಬ್ಬಳ್ಳಿಯ ಸಿದ್ಧಾರೂಢರ ಹುಟ್ಟೂರು ಯಾವುದು ಗೊತ್ತಾ? ಇಂದಿಗೂ ಇದೆ ಅವರು ವಾಸವಿದ್ದ ಮನೆ, ಬಾವಿ

ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ಜನ್ಮಸ್ಥಳದ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹುಬ್ಬಳ್ಳಿಯ ಸಿದ್ಧಾರೂಢ ಮಠ ಅವರ ಐಕ್ಯಸ್ಥಳವಾದರೆ, ಅವರ ಹುಟ್ಟೂರು ಯಾವುದು ಎನ್ನುವುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳದ ರಹಸ್ಯ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿ, ನವೆಂಬರ್​ 04: ಸದ್ಗುರು ಸಿದ್ಧಾರೂಢರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದಲ್ಲಿ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ ದೇಶ ವಿದೇಶಗಳಲ್ಲೂ ಸಿದ್ಧಾರೂಢರ ಭಕ್ತರಿದ್ಧಾರೆ. ಆದರೆ ಅವರ ಹುಟ್ಟೂರು ಯಾವುದು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಮಹಾನ್ ಸಂತ ಸಿದ್ಧಾರೂಢರ ಜನ್ಮಸ್ಥಳ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ.

ಸಿದ್ಧಾರೂಢರ ಜನ್ಮಭೂಮಿ ಯಾವುದು?

ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಪವಾಡ ಪುರುಷನ ಹುಟ್ಟೂರು ಯಾವುದು ಅಂತಾ ಇನ್ನೂ ಅದೇಷ್ಟೋ ಭಕ್ತರಿಗೆ ಗೊತ್ತಿರಲಿಕ್ಕಿಲ್ಲ. ಆ ಸದ್ಗುರುವಿನ ಜನ್ಮಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ.

ಶ್ರೀ ಸಿದ್ಧಾರೂಢರು ಗುರುಶಾಂತಪ್ಪ, ತಾಯಿ ದೇವಮಲ್ಲಮ್ಮ ಉದರದಲ್ಲಿ 1836 ಜನವರಿ 26 ರಂದು ಜನಸಿದರು. ಸಿದ್ಧಾರೂಢರು ತಮ್ಮ 6ನೇ ವಯಸ್ಸಿನಲ್ಲಿಯೇ ತಂದೆ, ತಾಯಿ, ಬಂಧು ಬಳಗವನ್ನು ಬಿಟ್ಟು ಗುರು ಶೋಧನೆಗೆ ಹೊರಟರು. 31 ವರ್ಷಗಳ ಕಾಲ ಸಂಚಾರ ಮಾಡಿ 1877 ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆಯೂರಿದರು. ಅಲ್ಲಿ ಸಾಕಷ್ಟು ಪವಾಡಗಳನ್ನ ಮಾಡುತ್ತಾ, ಬಂದ ಭಕ್ತರ ಕಷ್ಟಗಳನ್ನ ಪರಿಹರಿಸುತ್ತಾ ಪವಾಡ ಪುರುಷರಾದರು. ರಾಜ್ಯ, ದೇಶ ಸೇರಿದಂತೆ ವಿದೇಶದಲ್ಲಿಯೂ ಸಿದ್ಧಾರೂಢರ ಲಕ್ಷಾಂತರ ಭಕ್ತರಿದ್ದಾರೆ.

Share

Related posts

Leave a Comment