ಹಣ ವಂಚನೆ ಪ್ರಕರಣ ಆರೋಪಿ ಶಿವಾನಂದ್ ನೀಲಣ್ಣನವರ್ಗೆಗೆ ಕೇವಲ ಡುಡ್ಡು ಗಳಿಸುವುದಷ್ಟೇ ಅಲ್ಲ, ಸಿನಿಮಾದ ಮೇಲೂ ಅಪಾರ ಕ್ರೇಜ್ ಇತ್ತು. ಇದೇ ಹಠದಿಂದ ಅವರು ಕೋಟಿಗಟ್ಟಲೆ ಖರ್ಚು ಮಾಡಿ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಕನ್ನಡದ ‘ಚಾಂಪಿಯನ್’ (2023) ಚಿತ್ರದ ವಿಶೇಷ ಹಾಡಿಗೆ ಕರೆತಂದಿದ್ದರು. ಹಣದ ಹರಿವಿದ್ದ ಆ ಸಮಯದಲ್ಲಿ ಶಿವಾನಂದ್, ಸನ್ನಿ ಕೇಳಿದ ಒಂದು ಕೋಟಿ ರೂಪಾಯಿ ಭಾರಿ ಸಂಭಾವನೆಯನ್ನು ಕೊಟ್ಟು ‘ಡಿಗ್ರಿಬಿಲ್ಲಿ ನಾನು..’ ಹಾಡಿನಲ್ಲಿ ನರ್ತಿಸುವಂತೆ ಮಾಡಿದ್ದರು. ಆದ್ರೆ ಸನ್ನಿ ಕುಣಿದಿದ್ದ ಆ ‘ಚಾಂಪಿಯನ್’ ಸಿನಿಮಾ ಏನು ದೊಡ್ಡ ಹಿಟ್ ಆಗ್ಲಿಲ್ಲ


