Public News 18
Breaking News Breaking-News Hubli-Dharwad Karnataka

ನವಲಗುಂದದಲ್ಲಿ ಯು.ಜಿ.ಡಿ ಹಗರಣ ಬಯಲು ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರಾ ಗುತ್ತಿಗೆದಾರ?

ಯಾವುದೇ ಅಧಿಕೃತ ಎಸ್ಟಿಮೇಷನ್ ಕಾಪಿ ಇಲ್ಲದೆಯೇ ಸಾರ್ವಜನಿಕರ ತೆರಿಗೆ ಹಣ ಕೊಳ್ಳೆ ಹೊಡೆಯುವ ಆಸ್ತಿಯೇ?

ನಿಯಮಾವಳಿಗಳನ್ನು ಗಾಳಿಗೆ ತೂರಿ, ಕನಿಷ್ಠ ಗುಣಮಟ್ಟವೂ ಇಲ್ಲದೆ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವುದು ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು,,,ನವಲಗುಂದ ಪಟ್ಟಣದಲ್ಲಿ ಅಂದಾಜು 30 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವಂತಹ ಯು.ಜಿ.ಡಿ (ಒಳಚರಂಡಿ) ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ನೇರ ಆಪಾದನೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ನಿರ್ಮಾಣಕ್ಕೆ ಕಳಪೆ ದರ್ಜೆಯ ಇಟ್ಟಿಗೆ ಹಾಗೂ ಅಸಮರ್ಪಕ ಸಿಮೆಂಟ್ ಮಿಶ್ರಣವನ್ನು ಬಳಸಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ಎಸ್ಟಿ ಮೇಶನ್ ಕಾಫಿ ಇಲ್ಲದೆ ಕಾಮಗಾರಿ ಮಾಡುತ್ತಿರುವುದು ಸಾರ್ವಜನಿಕರ ತೆರಿಗೆ ಹಣದ ಹಗಲು ದರೋಡೆಯಾಗಿದೆ

ಇಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಕಾಮಗಾರಿ ನಡೆಯುವ ಸ್ಥಳದಲ್ಲಿ ಇಲಾಖೆಯ ಯಾವುದೇ ಜವಾಬ್ದಾರಿಯುತ ಎಂಜಿನಿಯರ್‌ಗಳು ಇರುತ್ತಿಲ್ಲ! ಗುತ್ತಿಗೆದಾರರು ತಮಗೆ ಇಷ್ಟಬಂದಂತೆ, ಮನಸೋಇಚ್ಛೆ ಕಾಮಗಾರಿ ನಡೆಸಿ ಸಾರ್ವಜನಿಕರ ತೆರಿಗೆ ಹಣವನ್ನು ನೇರವಾಗಿ ಪೋಲು ಮಾಡುತ್ತಿದ್ದಾರೆ.

ಮಾಧ್ಯಮದಲ್ಲಿ ಈ ಹಿಂದೆಯೇ ಈ ಬಗ್ಗೆ ವಿಸ್ತೃತ ಸುದ್ದಿ ಪ್ರಸಾರವಾಗಿದ್ದರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದು ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರನ ನಡುವಿನ ಒಳ ಒಪ್ಪಂದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಕೋಟಿ ಕೋಟಿ ಸಾರ್ವಜನಿಕರ ಹಣ ಪೋಲಾಗುತ್ತಿರುವುದನ್ನು ತಕ್ಷಣವೇ ತಡೆಗಟ್ಟಬೇಕು. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಬೇಕು ಮತ್ತು ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕರು ಹಾಗೂ ಹೋರಾಟಗಾರರು ತೀವ್ರವಾಗಿ ಒತ್ತಾಯಿಸಿದ್ದಾರೆ

Share

Related posts

Leave a Comment