ಹುಬ್ಬಳ್ಳಿ ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿಎಸ್‌ವಿ ಪ್ರಸಾದ್ ಅವರಿಗೆ ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ – 2026 ಪ್ರದಾನ ಮಾಡಿ ಗೌರವಿಸಲಾಯಿತು.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೋಂದಾಯಿತ ಗ್ಲೋಬಲ್ ರಿಸರ್ಚ್ ಫೌಂಡೇಶನ್ ಎಲ್‌ಎಲ್‌ಸಿ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ ಮತ್ತು ನಟಿ ಅಮೀಷಾ ಪಟೇಲ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಿಎಸ್‌ವಿ ಪ್ರಸಾದ್, ಸಾಧಕರನ್ನು ಸನ್ಮಾನಿಸುವುದು ಅವರ ಸಾಧನೆಯನ್ನು ಗುರುತಿಸಿ ಗೌರವಿಸುವುದಷ್ಟೇ ಅಲ್ಲ, ಇತರರಿಗೆ ಪ್ರೇರಣೆಯಾಗುವಂತೆ ಮಾಡುವ ವೃತ್ತಿಪರತೆಯ ಮೌಲ್ಯವರ್ಧನೆ ಮತ್ತು ಸಾಮಾಜಿಕ ಉನ್ನತೀಕರಣದ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವೈವಿಧ್ಯಮಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವೃತ್ತಿಪರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಪರಣ್ಣ ಮುನವಳ್ಳಿ, ಉದ್ಯಮಿ ವೀರೇಂದ್ರ ಕೌಜಲಗಿ, ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಡಾ. ಜಿತೇಂದ್ರ ಮಜೇಥಿಯಾ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿ ಮುರುಗೇಶ ಚನ್ನಣ್ಣವರ, ಪ್ರೇಮಜಿ ಫೌಂಡೇಶನ್ ಸಂಸ್ಥಾಪಕ ಗುರುರಾಜ ಹೂಗಾರ, ಎಂ.ಎಂ. ಜೋಶಿ ಆಸ್ಪತ್ರೆಯ ಶ್ರೀನಿವಾಸ ಜೋಶಿ ಹಾಗೂ ಡಾ. ಅಭಯ ಜೋಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ದೇಶದ 28 ರಾಜ್ಯಗಳಿಂದ ಆಗಮಿಸಿದ್ದ ಸುಮಾರು 150ಕ್ಕೂ ಹೆಚ್ಚು ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಕರಣ್ ಮೆಹ್ರಾ, ಅಶ್ನೂರ್ ಕೌರ್, ಹೌತನ್ ಪೂನಿವಾಲಾ, ಸಂಸ್ಥಾಪಕ ಅಧ್ಯಕ್ಷ ಶ್ರೀಧರ ದಾವಸ್ಕರ್, ಸಿಇಒ ಐಶ್ವರ್ಯಾ ದಾವಸ್ಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

